ಲಕ್ನೋ, ಡಿ.21 (DaijiworldNews/PY): "ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಅಸಲಿ ಉದ್ದೇಶ ಬಯಲಾಗಿದೆ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹತ್ರಾಸ್ ಘಟನೆಯಲ್ಲಿ ಬಿಜೆಪಿ ಸರ್ಕಾರದ ಸುಳ್ಳು ಹೇಗೆ ಬಯಲಾಯಿತೋ ಹಾಗೆಯೇ ಯುಪಿ ಸರ್ಕಾರದ ಸುಳ್ಳು ಪ್ರಕರಣಗಳು ಕೂಡಾ ಬಯಲಾಗಿದೆ" ಎಂದಿದ್ದಾರೆ.
"ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರದ ನಿಜ ಉದ್ದೇಶ ತಿಳಿದಿದೆ. ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ವಿರುದ್ದದ ಸುಳ್ಳು ಪ್ರಕರಣಗಳಲ್ಲಿಯೂ ಕೂಎಆ ಸರ್ಕಾರ ಇದೇ ರೀತಿಯಾದ ಪರಿಸ್ಥಿತಿಯನ್ನು ಎದುರಿಸಲಿದೆ" ಎಂದಿದ್ದಾರೆ.
"ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವದ ಮೇಲೆ ನಮಗೆ ನಂಬಿಕೆ ಇದೆ. ಆಜಂ ಖಾನ್ಗೆ ನ್ಯಾಯ ಸಿಗಲಿ ಎಂದು ನಾವು ಬಯಸುತ್ತೇವೆ" ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭ ಆಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅವರು ಸಲ್ಲಿಸಿದ ಜನನ ಪ್ರಮಾಣಪತ್ರ ನಕಲಿ ಎನ್ನುವ ಆರೋಪದಡಿ ಆಜಂ ಖಾನ್ ಹಾಗೂ ಅವರ ಪುತ್ರನ ವಿರುದ್ದ ಪ್ರಕರಣ ದಾಖಲಾಗಿದೆ.