ನಾಸಾ, ಡಿ.21 (DaijiworldNews/HR): ಡಿ.21ರಂದು ಸಂಜೆ ಗುರು ಮತ್ತು ಶನಿ ಗ್ರಹಗಳ ಜೋಡಿಯ ಅಪರೂಪದ ದೃಶ್ಯವು 800 ವರ್ಷಗಳ ಬಳಿಕ ಅತ್ಯಂತ ಸಮೀಪದಲ್ಲಿ ಕಂಡುಬರಲಿದೆ.
800 ವರ್ಷಗಳ ಬಳಿಕ ಅತ್ಯಂತ ಸಮೀಪದಲ್ಲಿ ಕಂಡುಬರಲಿರುವ ಗುರು ಮತ್ತು ಶನಿ ಗ್ರಹಗಳ ಅಪರೂಪದ ಜೋಡಣೆ ಇನ್ನು 2080 ರವರೆಗೆ ಕಾಣಿಸುವುದಿಲ್ಲ.
ಈ ಗುರು ಮತ್ತು ಶನಿ ಗ್ರಹಗಳ ಜೋಡಿ ಕೇವಲ 1 ಗಂಟೆ 45 ನಿಮಿಷಗಳಷ್ಟು ಮಾತ್ರ ಕಾಣಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8 ಗಂಟೆಯವರೆಗೆ ಕಾಣುತ್ತದೆ. ನಂತರ ನೈರುತ್ಯದಲ್ಲಿ 8 ಗಂಟೆಗೆ ಅಸ್ತವಾಗುತ್ತದೆ.
ನಾಸಾ ಹೇಳುವ ಪ್ರಕಾರ, "ಗ್ರಹಗಳು ಆಕಾಶದಲ್ಲಿ ಪರಸ್ಪರ ಹತ್ತಿರ ಹೋಗಿ ಸುಮಾರು 400 ವರ್ಷಗಳಾಗಿವೆ, ಮತ್ತು ಶನಿ ಮತ್ತು ಗುರುಗಳ ಜೋಡಣೆ ರಾತ್ರಿಯಲ್ಲಿ ಸಂಭವಿಸಿ ಸುಮಾರು 800 ವರ್ಷಗಳಾಗಿವೆ" ಎಂದು ಹೇಳುತ್ತದೆ.