ಶ್ರೀನಗರ, ಡಿ.21 (DaijiworldNews/HR): ಚೀನಾದ ಸೈನಿಕರು ಭಾರತದ ನ್ಯೋಮಾ ಪ್ರದೇಶದ ಚಂಗ್ತಾಂಗ್ ಗ್ರಾಮಕ್ಕೆ ನಾಗರಿಕ ವೇಷದಲ್ಲಿ ಎರಡು ವಾಹನಗಳಲ್ಲಿ ನುಸುಳಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ನಾಗರಿಕರ ವೇಷದಲ್ಲಿದ್ದ ಚೀನಿ ಸೈನಿಕರು ಸ್ಥಳೀಯರು ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದ ಕಾರಣ ಅವರು ಹಿಂದಕ್ಕೆ ಹೋಗಿದ್ದಾರೆ.
ಭಾರತ- ಚೀನಾ ಗಡಿಯಲ್ಲಿ ಭಾರತದ ಭೂಪ್ರದೇಶದೊಳಕ್ಕೆ ಪ್ರವೇಶಿಸುತ್ತಿರುವುದು ವೀಡಿಯೊವನ್ನು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮಸ್ಥರು ಪ್ರಬಲ ಪ್ರತಿಭಟನೆ ನಡೆಸಿ ಅವರನ್ನು ಹಿಂದಕ್ಕೆ ಕಳುಹಿಸುವಲ್ಲಿ ಸಫಲರಾಗಿ, ಬಳಿಕ ಐಟಿಬಿಪಿ ಸಿಬ್ಬಂದಿ ಕೂಡಾ ಕಾರ್ಯಾಚರಣೆ ಆರಂಭಿಸಿರುವುದು ವೀಡಿಯೊದಲ್ಲಿದೆ.