ಚಂಡೀಗಡ,ಡಿ.21 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಕಳೆದ ಹಲವು ದಿನಗಳಿಂದ ರಸ್ತೆಗಳನ್ನು ತಡೆಗಟ್ಟುವ ಮೂಲಕ ಪ್ರತಿಭಟಿಸುತ್ತಿರುವುದು ಸರಿಯಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ಖಟ್ಟರ್ ಹೇಳಿದ್ದಾರೆ.
ಈ ಕುರಿತು ದಕ್ಷಿಣ ಹರಿಯಾಣದ ನರ್ನೌಲ್ನಲ್ಲಿ ನಡೆದ ಜಲ್ ಅಧಿಕಾರ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, "ರಾಜಕೀಯ ಉದ್ದೇಶಕ್ಕಾಗಿ ಬೆರಳೆಣಿಕೆಯಷ್ಟು ಜನರು ಮಾತ್ರ ವಿರೋಧಿಸುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕಿದೆ, ಆದರೆ ರಸ್ತೆಗಳನ್ನು ತಡೆಗಟ್ಟುವ ಮೂಲಕ ಒತ್ತಡ ಹೇರಲು ಸಾಧ್ಯವಿಲ್ಲ" ಎಂದರು.
"ರೈತರಿಗೆ ಪ್ರತಿಭಟಿಸಲು ಅನೇಕ ಮಾರ್ಗಗಳಿವೆ, ಮಾಧ್ಯಮಗಳ ಮೂಲಕ ಜನರ ನಡುವೆ ಹೋಗಿ ಸಭೆ ನಡೆಸಬಹುದು. ಆದರೆ 50,000ದಿಂದ 70,000 ಜನರನ್ನು ಒಟ್ಟುಗೂಡಿಸಿ ರಸ್ತೆಗಳನ್ನು ತಡೆಗಟ್ಟುವ ಮೂಲಕ ಪ್ರತಿಭಟಿಸುವುದು ಸರಿಯಲ್ಲ" ಎಂದು ಹೇಳಿದ್ದಾರೆ.