ತಂಜಾವೂರ್, ಡಿ.21 (DaijiworldNews/PY): "ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯು ರಾಜಕೀಯ ಸ್ವರೂಪದ್ದು" ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
ರೈತರೊಂದಿಗಿನ ಸಂವಾದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೂತನ ಕೃಷಿ ಕಾಯ್ದೆಗಳ ವಿರುದ್ದ ರೈತರ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಸ್ವರೂಪದಿಂದ ಕೂಡಿದೆ. ಎನ್ಡಿಎ ಸರ್ಕಾರದ ಮುಖ್ಯ ಉದ್ದೇಶವೇ ರೈತರ ಕಲ್ಯಾಣ" ಎಂದಿದ್ದಾರೆ.
"ಎಪಿಎಂಸಿ ಕಾಯ್ದೆಯಿಂದ ಎಎಪಿ, ಸೇರಿದಂತೆ ಕಾಂಗ್ರೆಸ್, ಎನ್ಸಿಪಿ ಹಾಗೂ ಇತರ ಪಕ್ಷಗಳು ರೈತರನ್ನು ಮುಕ್ತಗೊಳಿಸಲು ಯತ್ನಿಸಿದ್ದವು. ಮೋದಿ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಮಣ್ಣು ಕಾರ್ಡ್ ಯೋಜನೆ ಸೇರಿದಂತೆ ವಿಮೆ ಹಾಗೂ ವಿವಿಧ ಯೋಜನೆಗಳನ್ನ ಅನುಷ್ಠಾನಗೊಳಿಸಿದೆ" ಎಂದು ತಿಳಿಸಿದ್ದಾರೆ.
"ಕಳೆದ ಆರು ತಿಂಗಳುಗಳಲ್ಲಿ ಯಾವೆಲ್ಲಾ ಕಾರ್ಯಗಳನ್ನು ಮಾಡಲಾಗಿದೆಯೋ ಅದರಿಂದ ರೈತರು ಸಂತೋಷಗೊಂಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಹಾಗೂ ವಿವಿಧ ವಿಷಯಗಳ ವಿಚಾರವಾಗಿ ಗೊಂದಲಗಳನ್ನು ಪರಿಹರಿಸಲು ಯತ್ನಿಸಿದ್ದೇವೆ. ಆದರೆ, ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ" ಎಂದು ತಿಳಿಸಿದ್ದಾರೆ.