ನವದೆಹಲಿ, ಡಿ.21 (DaijiworldNews/PY): "ಜನವರಿಯಿಂದ ಭಾರತದಲ್ಲಿ ದೇಶದ ಜನತೆಗೆ ಲಸಿಕೆ ನೀಡಲು ಆರಂಭಿಸಹುದು" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದ ವೇಳೆ ಮಾತನಾಡಿದ ಅವರು, "ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಕಾರಿತ್ವ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ. ನಾನು ವೈಯುಕ್ತಿತವಾಗಿ ದೇಶದ ಜನರಿಗೆ ಜನವರಿಯಿಂದ ಯಾವುದೇ ಹಂತದಲ್ಲಿ ಅಥವಾ ಯಾವುದೇ ವಾರದಿಂದಾಗಲಿ ಕೊರೊನಾ ಲಸಿಕೆ ಶಾಟ್ ನೀಡಬಹುದಾಗಿದೆ" ಎಂದಿದ್ದಾರೆ.
"ಭಾರತವು ಕೊರೊನಾ ಲಸಿಕೆ ಹಾಗೂ ಸಂಶೋಧನೆಗೆ ಸಂಬಂಧಪಟ್ಟಂತೆ ಯಾವ ದೇಶಕ್ಕೂ ಕೂಡಾ ಕಡಿಮೆಯಿಲ್ಲ. ನಾವು ಅದರಲ್ಲಿ ಯಾವುದೆಲ್ಲಾ ಒಳಗೊಂಡಿರಬೇಕು ಎಂದು ಇಚ್ಛಿಸುವುದಿಲ್ಲ" ಎಂದು ಹೇಳಿದ್ದಾರೆ.
"ದೇಶದ ವಿಜ್ಞಾನಿಗಳು ಹಾಗೂ ತಜ್ಞರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ 6-7 ತಿಂಗಳುಗಳಲ್ಲಿ ಭಾರತವು ಸುಮಾರು 30 ಕೋಟಿ ಮಂದಿಗೆ ಚುಚ್ಚುಮದ್ದು ನೀಡುವಂತ ಸಾಮರ್ಥ್ಯ ಹೊಂದಿದೆ" ಎಂದಿದ್ದಾರೆ.