ಕೋಲ್ಕತ್ತ, ಡಿ.20 (DaijiworldNews/PY): "ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸಿದ್ದು, ಭ್ರಷ್ಟಾಚಾರ, ಸುಲಿಗೆ, ರಾಜಕೀಯ ಹಿಂಸೆಯನ್ನು ತೊಡೆದು ಹಾಕಲು ಮುಂದಾಗಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬೋಲ್ಪುರದಲ್ಲಿ ರೋಡ್ ಶೋದಲ್ಲಿ ಮಾತನಾಡಿದ ಅವರು, "ನಾನು ನನ್ನ ಜೀವಮಾನದಲ್ಲಿ ಹಲವರು ರೋಡ್ ಶೋಗಳಲ್ಲಿ ಪಾಲ್ಗೊಂಡಿದ್ದೇನೇ ಹಾಗೂ ಆಯೋಜನೆ ಮಾಡಿದ್ದೇನೆ. ಆದರೆ, ಈ ರೀತಿಯಾದ ರೋಡ್ ಶೋವನ್ನು ಕಂಡಿಲ್ಲ. ಇದು ದೀದಿ ಸರ್ಕಾರದ ವಿರುದ್ದ ಜನರ ಆಕ್ರೋಶದ ಪ್ರತಿಫಲನವಾಗಿದೆ" ಎಂದಿದ್ದಾರೆ.
"ಪಶ್ಚಿಮ ಬಂಗಾಳವನ್ನು ಈ ಹಿಂದೆ ಸೋನರ್ ಬಾಂಗ್ಲಾ ಎಂದು ಕರೆಯುತ್ತಿದ್ದು, ಈ ಪಟ್ಟಣದ ವೈಭವವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮರಳಿ ರೂಪಿಸಿಲಿದೆ" ಎಂದು ಹೇಳಿದ್ದಾರೆ.