ಬೆಂಗಳೂರು, ಡಿ.20 (DaijiworldNews/MB) : ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಆರ್ಯುಪಿಎಸ್ಎ) ರಾಜ್ಯದ ಶಿಕ್ಷಣ ಇಲಾಖೆಯ ವಿರುದ್ಧ ಶಸ್ತ್ರಸಜ್ಜಿತವಾಗಿದ್ದು ಡಿಸೆಂಬರ್ 21 ರ ಸೋಮವಾರದಿಂದ ತನ್ನ ಸಂಘದ ವ್ಯಾಪ್ತಿಗೆ ಬರುವ ಎಲ್ಲಾ ಆನ್ಲೈನ್ ತರಗತಿಗಳು ಮತ್ತು ಶಾಲೆಗಳ ಆಫ್ಲೈನ್ ತರಗತಿಗಳನ್ನು ರದ್ದುಗೊಳಿಸಲು ಸಂಘ ನಿರ್ಧರಿಸಿದೆ. ಇದಲ್ಲದೆ, ಇಡೀ ಶೈಕ್ಷಣಿಕ ವರ್ಷವನ್ನು ನಿಲ್ಲಿಸುವ ನಿರ್ಧಾರವನ್ನೂ ಸಂಘ ತೆಗೆದುಕೊಂಡಿದೆ.
ಜನವರಿ 1 ರಿಂದ 10 ಮತ್ತು ಪಿಯುಸಿ ತರಗತಿಗಳನ್ನು ಮತ್ತೆ ತೆರೆಯುವಂತೆ ಸರ್ಕಾರ ಹೇಳಿದೆ. ಆದರೆ ಸಂಘದ ಈ ನಿರ್ಧಾರವು ಸರ್ಕಾರದ ನಿರ್ಧಾರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಡಿಸೆಂಬರ್ 20 ರ ರವಿವಾರ ಮಧ್ಯಾಹ್ನ 1 ಗಂಟೆಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಯುಪಿಎಸ್ಎ ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸಿತು. ಆರ್ಯುಪಿಎಸ್ಎ ಅಡಿಯಲ್ಲಿ ಬರುವ ಎಲ್ಲಾ ಆಫ್ಲೈನ್ ಮತ್ತು ಆನ್ಲೈನ್ ತರಗತಿಗಳನ್ನು ಮುಚ್ಚುವುದರ ಜೊತೆಗೆ, ಜನವರಿ 6 ರಿಂದ ನಗರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಸಂಘ ನಿರ್ಧರಿಸಿದೆ
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಲೋಕೇಶ್ ತಾಳಿಕಟ್ಟೆ, "ರಾಜ್ಯದ ವಿವಿಧ ಭಾಗಗಳ ಶಾಲೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ನಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ. ಶಿಕ್ಷಣ ಇಲಾಖೆಯು ಅತೀ ಬುದ್ದಿವಂತಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣ ಸಚಿವರು ತಪ್ಪು ಮಾಡುತ್ತಿದ್ದಾರೆ. ಡಿಸೆಂಬರ್ 19 ರ ಶನಿವಾರದಂದು ನಾವು ಸಿಎಂಗೆ ಅವರು ವರದಿಯನ್ನು ನೀಡಿದರು. ಆದರೆ ಅವರು ನಮ್ಮ ಯಾವುದೇ ಬೇಡಿಕೆಗಳನ್ನು ಗೌರವಿಸಿಲ್ಲ. ವಿದ್ಯಾರ್ಥಿಗಳ ದಾಖಲಾತಿ ಕೂಡ ಈಗ ಅಸ್ತವ್ಯಸ್ತವಾಗಿದೆ'' ಎಂದು ಹೇಳಿದ್ದಾರೆ.
"ನಾವು 15 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರವು ಅವುಗಳನ್ನು ಒಪ್ಪದಿದ್ದರೆ, ಜನವರಿ 6 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ" ಎಂದು ಅವರು ಹೇಳಿದರು.
ಆರ್ಯುಪಿಎಸ್ಎ ಅಂಗಸಂಸ್ಥೆಯಲ್ಲಿ ರಾಜ್ಯಾದ್ಯಂತ 12,800 ಶಾಲೆಗಳಿವೆ.