ನವದೆಹಲಿ, ಡಿ.20 (DaijiworldNews/MB) : ಗುಜರಾತಿನ ಕರಾವಳಿ ಭಾಗದ ಮೂಲಕ ಭಾರತದೊಳಗೆ ನುಸುಳಿದ ಪಾಕಿಸ್ತಾನದ ಮೀನುಗಾರನೊಬ್ಬನನ್ನು ಬಂಧಿಸಲಾಗಿದ್ದು ಹಾಗೆಯೇ ಆತನ ದೋಣಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ರವಿವಾರ ಗಡಿ ಭದ್ರತಾ ಪಡೆ ತಿಳಿಸಿದೆ.
ಬಂಧಿತನನ್ನು ಸಿಂಧ್ ಪ್ರಾಂತ್ಯದ ನಿವಾಸಿ ಖಲೀದ್ ಹುಸೇನ್ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಅಧಿಕಾರಿಗಳು ಗುಜರಾತಿನ ಕರಾವಳಿ ಪ್ರದೇಶದ ಸಮೀಪ ಗಸ್ತು ಹಾಕುತ್ತಿದ್ದ ಸಂದರ್ಭ ಪಾಕಿಸ್ತಾನದ ಮೀನುಗಾರನ ದೋಣಿಯಲ್ಲಿ ಇರುವುದನ್ನು ಗಮನಿಸಿ ಆತನನ್ನು ಬಂಧಿಸಲಾಗಿದೆ. ಹಾಗೆಯೇ ಆತನ ಬೋಟ್, 20 ಲೀಟರ್ ಡಿಸೇಲ್, ಮೊಬೈಲ್ ಫೋನ್, ಮೀನು ಹಿಡಿಯುವ ಎರಡು ಬಲೆ, 8 ಪ್ಲಾಸ್ಟಿಕ್ ನೂಲು ವಶ ಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇನ್ನು ಬಿಎಸ್ಎಫ್ ಶೋಧ ಕಾರ್ಯಾಚರಣೆ ಪ್ರಾರಂಭ ಮಾಡಿದ್ದು ಈವರೆಗೂ ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.