ನವದೆಹಲಿ, ಡಿ.20 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಬೆಳಗ್ಗೆ ದೆಹಲಿಯ ಗುರುದ್ವಾರ ರಾಕಬ್ಗಂಜ್ಗೆ ಭೇಟಿ ನೀಡಿ ಗುರು ತೇಜ್ ಬಹದ್ದೂರ್ ಅವರ ತ್ಯಾಗಕ್ಕೆ ಗೌರವ ಸಲ್ಲಿಸಿದರು.
ಪ್ರಧಾನಿ ಮೋದಿ ಅವರ ಹಠಾತ್ ಭೇಟಿಯು ಗುರುದ್ವಾರದ ಅಧಿಕಾರಿಗಳಿಗೆ ಆಶ್ಚರ್ಯ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಇಂದು ಬೆಳಗ್ಗೆ ಗುರುದ್ವಾರದ ರಕಾಬ್ ಗಂಜ್ ಸಾಹಿಬ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಶ್ರೀಗುರು ತೇಜ್ ಬಹದ್ದೂರ್ ಅವರ ಪಾರ್ಥೀವ ಶರೀರವನ್ನು ಅಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ನಾನು ಅವರ ಆಶೀರ್ವಾದ ಪಡೆದೆ. ವಿಶ್ವದಾದ್ಯಂತ ಲಕ್ಷಾಂತರ ಜನರಂತೆ ನಾನೂ ಕೂಡಾ ಶ್ರೀಗುರು ತೇಜ್ ಬಹದ್ದೂರ್ ಜೀ ಅವರ ಅವರ ದಯೆಯಿಂದ ಪ್ರೇರಿತನಾಗಿ ಅವರಿಂದ ಸ್ಪೂರ್ತಿ ಪಡೆದಿದ್ದೇನೆ" ಎಂದು ತಿಳಿಸಿದ್ದಾರೆ.
"ಈ ದಿನವನ್ನು ನಾವು ಐತಿಹಾಸಿಕ ರೀತಿಯಲ್ಲಿ ಗುರುತಿಸೋಣ ಹಾಗೂ ಶ್ರೀಗುರು ತೇಜ್ ಬಹದ್ದೂರ್ ಜೀ ಅವರ ಆದರ್ಶಗಳನ್ನು ಪಾಲಿಸೋಣ" ಎಂದಿದ್ದಾರೆ.