ಬೆಂಗಳೂರು, ಡಿ.20 (DaijiworldNews/MB) : ''2020ರ ಒಳಗೆ ರೈತರ ಆದಾಯವು ದ್ವಿಗುಣವಾದರೆ ಯಾವ ತೊಂದರೆಯಾಗುತ್ತದೆ ಎಂದು ಹೋರಾಟಗಾರರು ಮತ್ತು ಚಿಂತಕರು ಉತ್ತರಿಸಬಹುದೇ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೇಳಿದ್ದಾರೆ.
ರಂಗಕರ್ಮಿ ಪ್ರಸನ್ನ ಅವರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿರುವ ಅವರು, ''ಪ್ರಸನ್ನ ಅವರು ಯಾವ ಕಾರಣಕ್ಕೆ ಹೋರಾಟ ನಡೆಸುತ್ತಿದ್ದಾರೆ ಎಂದು ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಅವರ ಈ ಹೋರಾಟ ಸಂಶಯಕ್ಕೆ ಕಾರಣವಾಗಿದೆ'' ಎಂದು ಹೇಳಿದ್ದಾರೆ.
''ಕೃಷಿ ಕಾಯ್ದೆ ವಿರೋಧಿಸುವ ಯಾರು ಬೇಕಾದರೂ ಈ ಪ್ರಶ್ನೆಗೆ ಉತ್ತರಿಸಲಿ'' ಎಂದು ಹೇಳಿರುವ ಸಿ.ಟಿ. ರವಿ, ''ತಪ್ಪು ತಿಳುವಳಿಕೆಯಿಂದ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿಯಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಸ್ಥಳೀಯವಾಗಿಯೂ ಕೆಲವರು ಹೋರಾಟ ಮಾಡುತ್ತಿದ್ದಾರೆ. ಅವರು ಮುಖ್ಯ ಉದ್ದೇಶ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವುದು ಆಗಿದೆ. ಬದಲಾಗಿ ಅವರಲ್ಲಿ ಯಾವುದೇ ರೈತಪರ ಕಾಳಜಿ ಇಲ್ಲ'' ಎಂದು ದೂರಿದ್ದಾರೆ.