ಗುವಾಹಟಿ, ಡಿ.20 (DaijiworldNews/PY): ಅಸ್ಸಾಂನ ಗುವಾಹಟಿಯಲ್ಲಿ ಶನಿವಾರ 20 ಎಲ್ಪಿಜಿ ಸಿಲಿಂಡರ್ಗಳ ಸ್ಪೋಟಗೊಂಡು 66 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದಿದ್ದಾರೆ.
ಈ ಅಗ್ನಿ ಅವಘಡವು ನಗರದ ಜುಕರ್ಬರಿಯಲ್ಲಿ ನಡೆದಿದ್ದು, ಮೊದಲಿಗೆ ಒಂದು ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಬೆಂಕಿ ಇತರ ಗುಡಿಸಲುಗಳಿಗೆ ಹರಡಿದ್ದು, ಈ ಸಂದರ್ಭ ಮನೆಯೊಳಗಿದ್ದ ಎಲ್ಜಿಪಿ ಸಿಲಿಂಡರ್ ಒಂದಾದ ಬಳಿಕ ಒಂದು ಸ್ಫೋಟಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಎಂದು ಅಂದಾಜು ಮಾಡಲಾಗಿದೆ. ಘಟನೆಯ ಬಗ್ಗೆ ತನಿಖೆ ಕೈಗೊಳ್ಳು ಆದೇಶ ನೀಡಲಾಗಿದೆ.
ಘಟನಾ ಸ್ಥಳಕ್ಕೆ 14 ಅಗ್ನಿಶಾಮಕ ವಾಹನಗಳು ಬಂದಿದ್ದು, ಸುಮಾರು ಮೂರು ಗಂಟೆಗಳ ಕಾಲ ಪ್ರಯತ್ನಿಸಿದ ನಂತರ ಬೆಂಕಿ ನಂದಿಸುವ ಕಾರ್ಯ ಸಫಲವಾಗಿದೆ.