ನವದೆಹಲಿ, ಡಿ.20 (DaijiworldNews/PY): ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಅಕ್ರಮ ಹಣ ಸಾಗಣೆ ಆರೋಪದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹಾಗೂ ಇತರರಿಗೆ ಸೇರಿದ 11.86 ಕೋಟಿ.ರೂ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಜಮ್ಮು ಹಾಗೂ ಶ್ರೀನಗರದಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಆದೇಶ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ಲಾ ಅವರನ್ನು ಅಕ್ಟೋಬರ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಜಪ್ತಿ ಮಾಡಿದ ಆಸ್ತಿಗಳನ್ನು ಅಕ್ರಮ ಹಣ ಸಾಗಣೆ ನಿಗ್ರಹ ಕಾಯ್ದೆಯಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ಎರಡು ಸ್ಥಿರಾಸ್ತಿಗಳು ವಸತಿ ಸ್ಥಾನಗಳಾಗಿದ್ದು, ಇನ್ನೊಂದು ವಾಣಿಜ್ಯ ಮಹತ್ವ ಹೊಂದಿದೆ. ಇನ್ನುಳಿದ ಮೂರು ಜಾಗಗಳು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.