ಬೆಂಗಳೂರು, ಡಿ.19 (DaijiworldNews/PY): "ಪ್ರಧಾನಿ ಮೋದಿ ಅವರಿಗೆ ರೈತರ ಕಷ್ಟ ಏನು ಎಂದು ತಿಳಿದಿಲ್ಲ ಎಂದು ಹೇಳುವ ರಾಹುಲ್ ಗಾಂಧಿ ಅವರು ಹೊಲ ಉತ್ತಿದ್ದಾರಾ? ಬಿತ್ತಿದ್ದಾರಾ?. ಅವರ ತಂದೆ, ತಾಯಿ, ಅಜ್ಜ, ಅಜ್ಜಿ ಯಾರೂ ಕೂಡಾ ರೈತರಲ್ಲ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ರೈತರ ಪರಂಪರೆಯಲ್ಲಿ ಬಾರದವರು ಈ ವಿಚಾರವಾಗಿ ಬುದ್ಧಿವಾದ ಹೇಳುವುದು ಸೂಕ್ತವಲ್ಲ. ಕೈ ನಾಯಕರದು ಡೋಂಗಿ ರಾಜಕಾರಣ" ಎಂದಿದ್ದಾರೆ.
"ಇದಕ್ಕೂ ಮುನ್ನ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಬಿಟ್ಟು ಬೇರೆ ಕಡೆ ಮಾರಾಟ ಮಾಡುವಂತೆ ಇರಲಿಲ್ಲ. ಈ ರೀತಿಯಾಗಿ ಮಾಡಿದ್ದರೆ ರೈತರ ಮೇಲೆ ಕೇಸ್ ದಾಖಲಿಸಬಹುದಿತ್ತು. ನೂತನ ಕಾಯ್ದೆಗಳಿಂದ ರೈತ ತಾನು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಕೂಡಾ ಮಾರಾಟ ಮಾಡಬಹುದಾಗಿದೆ" ಎಂದು ತಿಳಿಸಿದ್ದಾರೆ.
"ಸಿದ್ದರಾಮಯ್ಯ ಅವರಿಗೆ ಸೋಲಿಣಿಸಿದವರು ಇಂದಿಗೂ ಕೂಡಾ ಅವರೊಂದಿಗೆ ಇದ್ದಾರೆ. ಈ ವಿಚಾರವನ್ನು ಅವರು ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿಯೇ ಹೇಳಿರಬೇಕು. ಇದುವೇ ಕಾಂಗ್ರೆಸ್ನ ಆಂತರಿಕ ಕಚ್ಚಾಟ. ಆದರೆ, ಜೆಡಿಎಸ್ ಯಾವುದೇ ರೀತಿಯಾದ ಮಾಡಿಕೊಂಡಿಲ್ಲ. ಮಾಡಿದ್ದೇ ಆದಲ್ಲಿ ಅದು ಹೆಚ್ಡಿಕೆ ಹಾಗೂ ಡಿಕೆಶಿ ನಡುವೆ" ಎಂದಿದ್ದಾರೆ.