ನವದೆಹಲಿ, ಡಿ.19 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರ ಯೋಜಿತವಲ್ಲದ ಲಾಕ್ಡೌನ್ ಹೇಳಿಕೊಂಡಂತೆ 21 ದಿನಗಳಲ್ಲಿ ಕೊರೊನಾ ಹೋರಾಟದಲ್ಲಿ ಸಫಲವಾಗಿಲ್ಲ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶದಲ್ಲಿ ಶನಿವಾರ ಕೊರೊನಾ ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿದ್ದು, ಸುಮಾರು 1.5 ಲಕ್ಷ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜಿತವಲ್ಲದ ಲಾಕ್ಡೌನ್ ಹೇಳಿಕೊಂಡಂತೆ 21 ದಿನಗಳಲ್ಲಿ ಕೊರೊನಾ ಹೋರಾಟದಲ್ಲಿ ಸಫಲವಾಗಿಲ್ಲ. ಇದು ಲಕ್ಷಾಂತರ ಮಂದಿಯ ಜೀವವನ್ನು ನಾಶ ಮಾಡಿತು" ಎಂದು ಆರೋಪಿಸಿದ್ದಾರೆ.
"ಮಹಾಭಾರತದಲ್ಲಿ ಯುದ್ಧವನ್ನು 18 ದಿನಗಳಲ್ಲಿ ಗೆಲ್ಲಲಾಯಿತು. ಆದರೆ, ಇಲ್ಲಿ ಕೊರೊನಾ ವಿರುದ್ದ ಯುದ್ದದಲ್ಲಿ ಗೆಲುವು ಸಾಧಿಸಲು 21 ದಿನಗಳು ಬೇಕು" ಎಂದು ಲೇವಡಿ ಮಾಡಿದ್ದಾರೆ.