ಕೊಲ್ಕತಾ, ಡಿ.19 (DaijiworldNews/MB) : ''ಭಾರತ ದೇಶದ ಪುನರುತ್ಥಾನಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿವರು, ಭಾರತ ಮಾತೆಯ ಅತಿ ಮಹಾನ್ ಪುತ್ರ ಸ್ವಾಮಿ ವಿವೇಕಾನಂದರು'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ತಮ್ಮ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ಗೆ ಬೇಟಿ ನೀಡಿದ ಅವರು, ''ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಸಲ್ಲಿಸಿ ಬಳಿಕ ಮಾತಾನಾಡಿದರು. ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಸಲ್ಲಿಸಲು ಹಾಗೂ ರಾಮಕೃಷ್ಣ ಮಿಷನ್ನಲ್ಲಿ ಕಾಲ ಕಳೆಯಲು ನನಗೆ ಅವಕಾಶ ದೊರಕಿರುವುದು ನನ್ನ ಪುಣ್ಯ'' ಎಂದು ಹೇಳಿದರು.
''ನಾವಿಂದು ವಿವೇಕಾನಂದರು ತೋರಿದ ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ದಾರಿಯಲ್ಲಿ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನೇ ಈ ದೇಶಕ್ಕಾಗಿ ಮುಡುಪಾಗಿಟ್ಟಿವರು. ಅವರು ಭಾರತ ಮಾತೆಯ ಅತಿ ಮಹಾನ್ ಪುತ್ರ'' ಎಂದರು.