ಬೆಂಗಳೂರು, ಡಿ.19 (DaijiworldNews/PY): ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿವಾಗಲೇ ಮದ್ಯ ಮಾರಾಟವು ಗರಿಷ್ಠ ಮಟ್ಟಕ್ಕೆ ಏರುತ್ತಿದ್ದು, ಎಂಟು ದಿನಗಳಲ್ಲಿ 925 ಕೋಟಿ. ರೂ. ನಷ್ಟು ಮದ್ಯ ಮಾರಾಟವಾಗಿದೆ.
ಸಾಂದರ್ಭಿಕ ಚಿತ್ರ
ಡಿ.7 ಹಾಗೂ ಡಿ.16ರ ನಡುವೆ 925 ಕೋಟಿ ರೂ.ನಷ್ಟು ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ. ಈ ನಡುವೆ ಡಿ.12 ಹಾಗೂ 13 ರಜಾದಿನಗಳಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಡಿ.22 ಹಾಗೂ 27ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಮುಂದಿನ ಆರರಿಂದ ಏಳು ದಿನ ಮದ್ಯ ಮಾರಾಟದ ಅಂಕಿ ಅಂಶವು 1,000 ಕೋಟಿ ರೂ.ಯಷ್ಟು ಹೆಚ್ಚಳವಾಗುವ ಸಾಧ್ಯತೆ ಎನ್ನಲಾಗಿದೆ.
ಪ್ರತಿಯೋರ್ವನು ಎರಡು ಲಕ್ಷ ರೂ. ಮೌಲ್ಯದ ಮದ್ಯವನ್ನು ಖರೀದಿ ಮಾಡುತ್ತಾನೆ ಎಂದು ಹೇಳಲಾಗಿದೆ. ಕೊರೊನಾ ಲಾಕ್ಡೌನ್ ಕಾರಣ ಅಬಕಾರಿ ಇಲಾಖೆಗೆ ಭಾರಿ ನಷ್ಟವಾಗಿದೆ. ಈಗ ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವುದರಿಂದ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.