ಮುಂಬೈ, ಡಿ.19 (DaijiworldNews/HR): ಶಿವಸೇನಾ ಮುಖಂಡ ಮೋಹನ ರಾವಲೆ (72) ಅವರು ಹೃದಯಾಘಾತದಿಂದ ಶನಿವಾರ ಗೋವಾದಲ್ಲಿ ನಿಧನರಾಗಿದ್ದಾರೆ.
ಮೋಹನ ರಾವಲೆ ಅವರು ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಅವರು ಐದು ಬಾರಿ ಸಂಸದರಾಗಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಶಿವಸೇನಾ ಮುಖಂಡ ಸಂಜಯ್ ರಾವತ್ "ಮೋಹನ ರಾವಲೆ ಅವರು ನಿಧನರಾಗಿದ್ದರೆ, ಅವರು ನಿಜವಾದ ಶಿವಸೈನಿಕ ಹಾಗೂ ವಿಶಾಲ ಹೃದಯದ ಸ್ನೇಹಿತರಾಗಿದ್ದರು" ಎಂದು ಬರೆದುಕೊಂಡಿದ್ದಾರೆ.