ಹೊಸದಿಲ್ಲಿ,ಡಿ.19 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧದ ಪ್ರತಿಭಟನೆಗಳು ಪ್ರತಿಯೊಬ್ಬರ ಆಂದೋಲನವಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್ ಹೇಳಿದ್ದು, ಹರ್ಯಾಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕಳೆದ ಮೂರು ವಾರಗಳಿಂದ ಕೃಷಿ ಮಸೂದೆಯನ್ನು ಖಂಡಿಸಿ ರೈತರು ದೆಹಲಿ, ಪಂಜಾಬ್, ಹರಿಯಾಣದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ನಾನು ಉತ್ಸುಕನಾಗಿದ್ದೇನೆ" ಎಂದರು.
ಇನ್ನು "ನಾನು ರೈತರೊಂದಿಗೆ ನಿಲ್ಲುತ್ತೇನೆ, ಇದು ಪ್ರತಿಯೊಬ್ಬರ ಪ್ರತಿಭಟನೆಯಾಗಿದ್ದು, ನಾನು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ನಾನು ಈಗ ಮುಂಚೂಣಿಯಲ್ಲಿ ನಿಲ್ಲದಿದ್ದರೆ ನಾನು ಕೇವಲ ರಾಜಕೀಯ ಮಾಡುತ್ತೇನೆಂದು ಜನರು ಭಾವಿಸುತ್ತಾರೆ" ಎಂದು ಹೇಳಿದ್ದಾರೆ.