ಮುಂಬೈ,ಡಿ.19 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಸ್ಥಿತಿಯನ್ನು ನೋಡಿ ಬಹಳ ಬೇಸರವಾಗಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಈ ಕುರಿತು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,"ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಹೊಸ ಕೃಷಿ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ, ತಾವು ಕಾರ್ಪೊರೇಟರ್ಗಳ ಅಡಿಯಾಳುಗಳಾಗಲಿದ್ದೇವೆ ಎಂಬ ಆತಂಕ ಅವರಲ್ಲಿದೆ" ಎಂದರು.
ಇನ್ನು "ನಾನು ಹುಟ್ಟಿ ಬೆಳೆದಿದ್ದು ಪಂಜಾಬ್ನಲ್ಲಿ, ಅಲ್ಲಿನ ರೈತರ ಜೊತೆ ಸಮಯ ಕಳೆದಿದ್ದೇನೆ. ಸ್ವಲ್ಪ ಸಮಯ ನೀಡಿದರೆ ಪಂಜಾಬ್ ಸಮುದಾಯಕ್ಕೆ ಪ್ರೀತಿಯಿಂದ ಮನವರಿಕೆ ಮಾಡಿಕೊಡಬಹುದು ಎಂಬ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ.