ನವದೆಹಲಿ,ಡಿ.19 (DaijiworldNews/HR): ಭಾರತ ಮತ್ತು ಚೀನಾ ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಿದ್ದು, ಲಡಾಖ್ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆ ನಡೆಯುವಂತಹ ಎಲ್ಲಾ ಸ್ಥಳಗಳಿಂದಲೂ ಅತ್ಯಂತ ಶೀಘ್ರದಲ್ಲೇ ಭಾರತ ಮತ್ತು ಚೀನಾ ಯೋಧರು ವಾಪಸ್ ಹಿಂದಿರುವ ನಿಟ್ಟಿನಲ್ಲಿ ಕೆಲಸ ಮುಂದುವರಿಸಲು ಒಪ್ಪಂದ ಮಾಡಿಕೊಂಡಿದೆ.
ಈ ಕುರಿತು ವಿದೇಶಾಂಗ ಇಲಾಖೆ ಆನ್ಲೈನ್ ಮುಖಾಂತರ ನಡೆದ ಸಭೆಯಲ್ಲಿ,"ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ಕೂಡಲೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ತಕ್ಷಣ ನಡೆಯಬೇಕು ಎನ್ನುವುದನ್ನೂ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ" ಎಂದು ತಿಳಿಸಿದೆ.
ಇನ್ನು ಅ.12 ಹಾಗೂ ನ.6ರಂದು ನಡೆದ ಸೇನಾ ಅಧಿಕಾರಿಗಳ ಮಟ್ಟದ ಏಳನೇ ಮತ್ತು ಎಂಟನೇ ಸುತ್ತಿನ ಮಾತುಕತೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.