ಕಾಸರಗೋಡು,ಡಿ.19 (DaijiworldNews/HR): ಕೊರೊನಾ ಹಿನ್ನಲೆಯಲ್ಲಿ ಮುಚ್ಚಿರುವ ಅಂಗನವಾಡಿಗಳನ್ನು ಪುನರಾರಂಭಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ.
ಡಿ. 21ರಿಂದ ಅಂಗನವಾಡಿ ನೌಕರರು ಮತ್ತು ಸಹಾಯಕರು ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ.
ಮಕ್ಕಳ ಪ್ರವೇಶಾತಿ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಹಾಗೂ ಶಿಶು ಕಲ್ಯಾಣ ಸಚಿವೆ ಕೆ. ಕೆ ಶೈಲಜಾ ಟೀಚರ್ ತಿಳಿಸಿದ್ದಾರೆ.
ಕೊರೊನಾ ಹಿನ್ನಲೆಯಲ್ಲಿ ಮಾರ್ಚ್ 10ರಿಂದ ಅಂಗನವಾಡಿಗಳನ್ನು ಬಂದ್ ಮಾಡಲಾಗಿತ್ತು.