ಚಿಕ್ಕಮಗಳೂರು, ಡಿ.19 (DaijiworldNews/HR): ಈ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಜೆಡಿಎಸ್ ಜೊತೆಗೆ ಒಂದಾಗಿದ್ದ ಸಿದ್ದರಾಮಯ್ಯ ಈಗ "ಕೈಗೆಟುಕದ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಕೇಳುತ್ತಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡೂ ಸೇರಿ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದು, ಎರಡೂ ಪಕ್ಷ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿಯಲ್ಲೂ ಅವರು ಸೋಲು ಅನುಭವಿಸಬೇಕಾಗುತ್ತಿತ್ತು" ಎಂದರು.
ಇನ್ನು ಸಿದ್ದರಾಮಯ್ಯ ಅವರು ಸೋಲಿಗೆ ಕಾರಣ ಹುಡುಕಿದ್ದಾರೆ, ಸೋಲಿಸಿದವರ ಜೊತೆ ಸೇರಿ ಅವರು ಸರ್ಕಾರ ರಚಿಸಿದ್ದು ಏಕೆ? ನಿಮ್ಮ ಕೈಗೆಟುಕದ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಇಲ್ಲಿ ಕೇಳುವವರಿಲ್ಲ" ಎಂದು ಸಿ ಟಿ ರವಿ ವ್ಯಂಗ್ಯ ಮಾಡಿದ್ದಾರೆ.