ಮುಂಬೈ,ಡಿ.18 (DaijiworldNews/HR): 2019ರಲ್ಲಿ ನನ್ನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರಲಿಲ್ಲ ಎಂದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮಾದಕ ವಸ್ತು ನಿಗ್ರಹ ದಳದ (ಎನ್ಸಿಬಿ) ನೋಟಿಸ್ಗೆ ಪ್ರತಿಕ್ರಿಯಿಸಿದ್ದಾರೆ.
2019ರಲ್ಲಿ ಕರಣ್ ಜೋಹರ್ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸುತ್ತಿರುವುದನ್ನು ತೋರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದ್ದರಿಂದ ಎನ್ಸಿಬಿ ಕರಣ್ ಜೋಹರ್ಗೆ ನೋಟಿಸ್ ನೀಡಿತ್ತು ಎಂದು ಎನ್ಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ವಿಡಿಯೊಗೆ ಸಂಬಂಧ ಪಟ್ಟಂತೆ ಎನ್ಸಿಬಿಗೆ ದೂರು ಕೂಡ ಬಂದಿದ್ದು, ಪಾರ್ಟಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ನೀಡುವಂತೆ ಎನ್ಸಿಬಿ ನೋಟಿಸ್ನಲ್ಲಿ ಕೇಳಿದ್ದು, ಪಾರ್ಟಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಸೇವಿಸಿಲ್ಲ ಎಂದು ನೋಟಿಸ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕರಣ್ ಜೋಹರ್ ಸ್ಪಷ್ಟಪಡಿಸಿದ್ದಾರೆ.