ನವದೆಹಲಿ, ಡಿ.18 (DaijiworldNews/PY): "ಭಾರತವು ಮುಂದಿನ ವರ್ಷ ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಸ್ಪುಟ್ನಿಕ್ ಕೊರೊನಾ ಲಸಿಕೆಯ 30 ಕೋಟಿ ಡೋಸ್ ತಯಾರಿಸಲಿದೆ" ಎಂದು ರಷ್ಯಾದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
"ಈಗಾಗಲೇ ರಷ್ಯಾ ಭಾರತದಲ್ಲಿ ಉತ್ಪಾದಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆಗಳನ್ನು ಪರೀಕ್ಷಿಸುತ್ತಿದೆ" ಎಂದು ಟ್ವಿಟ್ಟರ್ನಲ್ಲಿ ನವದೆಹಲಿಯ ರಾಯಭಾರ ಕಚೇರಿ ಹೇಳಿದೆ.
ನಾವು ಭಾರತದಲ್ಲಿ ನಾಲ್ಕು ದೊಡ್ಡ ಲಸಿಕೆ ತಯಾರಕರ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಡಿಮಿಟ್ರಿವ್ ರೊಸ್ಸಿಯಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಭಾರತವು ಮುಂದಿನ ವರ್ಷ 30 ಕೋಟಿ ಡೋಸ್ ಅನ್ನು ನಮಗಾಗಿ ತಯಾರು ಮಾಡಲಿದೆ" ಎಂದಿದ್ದಾರೆ.