ಶಿರಸಿ, ಡಿ.18 (DaijiworldNews/PY): "ವಿಧಾನ ಪರಿಷತ್ ಸಭಾಪತಿ ಅವರೇ ಕರ್ತವ್ಯ ಲೋಪವೆಸಗಿದ್ದಾರೆ" ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಶೋಕಾಸ್ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸದನದ ನಿಯಮವನ್ನು ಉಲ್ಲಂಘಿಸಿದ ಪ್ರತಾಪ್ ಚಂದ್ರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾರ್ಯದರ್ಶಿಯ ಮೇಲಲ್ಲ" ಎಂದಿದ್ದಾರೆ.
"ಸಭಾಪತಿಯವರೇ ಕರ್ತವ್ಯ ಲೋಪವೆಸಗಿದ್ದು. ಅವಿಶ್ವಾಸ ಇದ್ದ ವೇಳೆಯಲ್ಲೂ ಕೂಡಾ ಆ ಸ್ಥಾನದಲ್ಲಿ ಮುಂದುವರೆಯುವ ಮುಖೇನ ನಿಯಮ ಉಲ್ಲಂಘಿಸಿದ್ದಾರೆ" ಎಂದು ಹೇಳಿದ್ದಾರೆ.
"ವಿಧಾನ ಪರಿಷತ್ನಲ್ಲಿ ನಡೆದ ಘಟನೆ ಕಾಂಗ್ರೆಸ್ನ ಹತಾಶ ಮನಸ್ಥಿತಿಯನ್ನು ತೋರಿಸಿದೆ. ಬಹುಮತ ಇಲ್ಲದಿದ್ದರೂ ಕೂಡಾ ಹುದ್ದೆಯಲ್ಲಿ ಮುಂದುವರೆಯುವಂತ ಆಸೆಯನ್ನು ಅವರು ಇನ್ನು ಬಿಡಲಿಲ್ಲ" ಎಂದು ತಿಳಿಸಿದ್ದಾರೆ.