ಕೊಲ್ಕತ್ತಾ, ಡಿ.18 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಮತ್ತೊಬ್ಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ರಾಜೀನಾಮೆ ನೀಡಿದ್ದಾರೆ.
ನಿನ್ನೆ ಸುವೇಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಇಂದು ಬೆಳಗ್ಗೆ ಶಾಸಕ ಶಿಲ್ಭದ್ರ ದತ್ತ ತೃಣಮೂಲ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಬೇಟಿ ನೀಡುತ್ತಿದ್ದು, ಅಮಿತ್ ಶಾ ಸಮ್ಮುಖದಲ್ಲಿ ಇನ್ನು ಹಲವು ಟಿಎಂಸಿ ನಾಯಕರು, ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.