ನವದೆಹಲಿ, ಡಿ.18 (DaijiworldNews/PY): "ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ವರ್ಗಾವಣೆ ಮಾಡಿದ ಕೇಂದ್ರದ ಹಸ್ತಕ್ಷೇಪವನ್ನು ನಾನು ಖಂಡಿಸುತ್ತೇನೆ" ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಪಶ್ಚಿಮ ಬಂಗಾಳದ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ನಾನು ಖಂಡಿಸುತ್ತೇನೆ. ಚುನಾವಣೆ ನಡೆಯುವ ಮುನ್ನವೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಮುಖೇನ ರಾಜ್ಯದ ಹಕ್ಕುಗಳನ್ನು ಆಕ್ರಮಿಸಿದಂತಾಗಿದ್ದು, ಇದು ಒಕ್ಕೂಟದ ಮೇಲಿನ ಆಕ್ರಮಣ ಹಾಗೂ ಅಸ್ಥಿರಗೊಳೀಸುವ ಯತ್ನವಾಗಿದೆ" ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಭದ್ರತಾ ಲೋಪದ ಕಾರಣವನನ್ನು ನೀಡಿ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿತ್ತು.