ನವದೆಹಲಿ, ಡಿ.18 (DaijiworldNews/PY): ಡಿ.19ರ ಶನಿವಾರದಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದು, ಈ ಸಭೆಗೆ 23 ಮಂದಿ ಭಿನ್ನಮತೀಯರ ಗುಂಪಿನ ಕೆಲ ನಾಯಕರನ್ನೂ ಕೂಡಾ ಆಹ್ವಾನಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರ ಸಿದ್ಧತೆ ಸೇರಿದಂತೆ ರೈತ ಚಳವಳಿ, ಚಳಿಗಾಲದ ಅಧಿವೇಶನ ರದ್ದು ಮಾಡಿರುವುದು ಹಾಗೂ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಕೊರೊನಾ ಪ್ರಾರಂಭವಾದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ಹಿರಿಯ ಮುಖಂದರ ಸಭೆಯು ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಸಭೆಯು ರವಿವಾರವೂ ಕೂಡಾ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಈ ಸಭೆಗೆ ಭಿನ್ನಮತೀಯರ ಗುಂಪಿನ ನಾಯಕರ ಪೈಕಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಝಾದ್, ಉಪ ಮುಖಂಡ ಆನಂದ್ ಶರ್ಮಾ, ಹರಿಯಾಣ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಅವರನ್ನು ಆಹ್ವಾನಿಸಲಾಗಿದೆ.
ಕಳೆದ ವಾರ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ನಾಥ್ ಅವರು ಸೋನಿಯಾ ಗಾಂಧಿ ಅವರನ್ನು ಆಗೂ ಕೆಲವು ಭಿನ್ನಮತೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಕಮಲ್ನಾಥ್ ಅವರ ಒತ್ತಾಯಮ ಮೇರಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನೂ ಕೂಡಾ ಸಭೆಗೆ ಆಹ್ವಾನಿಸಲಾಗಿದೆ.