ನವದೆಹಲಿ, ಡಿ.18 (DaijiworldNews/PY): ಬಜರಂಗದಳದ ಮೇಲೆ ನಿಷೇಧ ಹೇರುವ ಯಾವುದೇ ಅಂಶಗಳು ಕಂಡುಬಂದಿಲ್ಲವೆಂದು ಸಂಸದೀಯ ಸಮಿತಿಗೆ ಫೇಸ್ಬುಕ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಇದಾದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಫೇಸ್ಬುಕ್ ಭಾರತ ಹಾಗೂ ಸಂಸತ್ತಿಗೆ ಸುಳ್ಳನ್ನು ಹೇಳುತ್ತಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಫೇಸ್ಬುಕ್ ಇಂಡಿಯಾ ನಮ್ಮ ಸಂಸದೀಯ ಸಮಿತಿಗೆ ಬಜರಂಗದಳದ ವಿಷಯವು ಆಕ್ರಮಣಕಾರಿಯಲ್ಲ ಎಂದು ಹೇಳುತ್ತಿದೆ. ಹಾಗಾದರೆ ಫೇಸ್ಬುಕ್ ಭಾರತ ಹಾಗೂ ಸಂಸತ್ತಿಗೆ ಸುಳ್ಳು ಹೇಳುತ್ತಿದೆಯೇ?" ಎಂದು ಕೇಳಿದ್ದಾರೆ.
ಅಮೇರಿಕಾದ ದಿನಪತ್ರಿಕೆಯ ವರದಿಯನ್ನು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಅವರು, "ಫೇಸ್ಬುಕ್ ಭದ್ರತಾ ತಂಡವು ಬಜರಂಗದಳವನ್ನು ನಿಷೇಧಿಸುವಂತೆ ತೀರ್ಮಾನ ಮಾಡಿದೆ" ಎಂದಿದ್ದಾರೆ.
"ಬಜರಂಗದಳದ ಮೇಲೆ ನಿಷೇಧ ಹೇರುವ ಯಾವುದೇ ಅಂಶಗಳು ಕಂಡುಬಂದಿಲ್ಲವೆಂದು ಸತ್ಯ ಪರಿಶೀಲನಾ ತಂಡವು ದೃಢಪಡಿಸಿದೆ" ಎಂದು ಫೇಸ್ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಹೇಳಿದ್ದರು.