ಚೆನ್ನೈ, ಡಿ.18 (DaijiworldNews/PY): "ಎಂಎನ್ಎಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರಿಗೆ ಕುಟುಂಬಗಳನ್ನು ಹಾಳು ಮಾಡುವುದೇ ಕೆಲಸ" ಎಂದು ರಿಯಾಲಿಟಿ ಶೋ ‘ಬಿಗ್ ಬಾಸ್’ ಉಲ್ಲೇಖಿಸಿ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಅವರು ಕಮಲ್ಗೆ ಟೀಕೆ ಮಾಡಿದ್ದಾರೆ.
"ರಾಮಚಂದ್ರ ಅವರಿಂದ ಸ್ಥಾಪಿತವಾಗಿರುವ ಎಐಎಂಡಿಎಂಕೆ ಮಾತ್ರವೇ ಅವರ ಪರಂಪರೆಗೆ ಹಕ್ಕುದಾರ. ಹಾಗಾದರೆ, ಬೇರೆಯವರ ಮಗುವಿಗೆ ಕಮಲ್ ಹಾಸನ್ ಅವರು ನಾಮಕರಣ ಮಾಡಬಹುದೇ?" ಎಂದು ಕೇಳಿದ್ದಾರೆ.
ಎಐಎಂಡಿಎಂಕೆ ಪಕ್ಷದ ಸ್ಥಾಪಕ, ಮಾಜಿ ಸಿಎಂ ದಿ.ಎಂ.ಜಿ.ರಾಮಚಂದ್ರನ್ ಅವರ ಪರಂಪರೆಯ ವಿಚಾರವಾಗಿ ಪ್ರಸ್ತಾಪ ಮಾಡಿದ ಹಾಗೂ ಸರ್ಕಾರವನ್ನು ಟೀಕೆ ಮಾಡಿದ್ದ ಬೆನ್ನಲ್ಲೇ ಪಳನಿಸ್ವಾಮಿ ಅವರು ಈ ಹೇಳಿಕೆ ನೀಡಿದ್ದಾರೆ.
ಇನ್ನು ಪಳನಿಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಮಲ್ ಹಾಸನ್, "ಸಿಎಂ ಅವರೂ ಕೂಡಾ ಬಿಗ್ಬಾಸ್ ರಿಯಾಲಿಟಿ ಶೋ ನೋಡಿದ್ದಾರೆ ಎಂದು ಬಹಳ ಸಂತಸವಾಗಿದೆ" ಎಂದಿದ್ದಾರೆ.