ಕಾಸರಗೋಡು, ಡಿ. 17 (DaijiworldNews/SM): ಯುಡಿಎಫ್ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು, ಬದಿಯಡ್ಕ ಠಾಣಾ ಎಸ್ ಐ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಡಿಸೆಂಬರ್ ೧೭ರ ಗುರುವಾರ ಸಂಜೆ ಬದಿಯಡ್ಕದಲ್ಲಿ ನಡೆದಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಯುಡಿಎಫ್ ವತಿಯಿಂದ ಬದಿಯಡ್ಕದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೆರವಣಿಗೆ ತೆರಳುತ್ತಿದ್ದವರ ಮೇಲೆ ಕಲ್ಲು ಹಾಗೂ ಇತರ ವಸ್ತುಗಳನ್ನು ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಕೃತ್ಯದ ಹಿಂದೆ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಎಂಬುವುದಾಗಿ ಯುಡಿಎಫ್ ಆರೋಪ ಮಾಡಿದೆ.
ಮೆರವಣಿಗೆ ಸಂದರ್ಭದಲ್ಲಿ ಸಿಪಿಎಂ ಕಚೇರಿ ಮೇಲೆ ಪಟಾಕಿ ಎಸೆಯಲಾಗಿದೆ. ಇದರಿಂದಾಗಿ ಬ್ಯಾನರ್ ಗಳಿಗೆ ಹಾನಿಯಾಗಿದೆ ಎಂದು ಸಿಪಿಎಂ ಆರೋಪ ಮಾಡಿದೆ.
ಬದಿಯಡ್ಕ ಠಾಣಾ ಪೊಲೀಸರು ತೀವ್ರ ತನಿಖೆ ಮುನ್ನಡೆಸಿದ್ದಾರೆ.