ಬೆಂಗಳೂರು, ಡಿ. 17 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ಸದ್ಯ ನಿಯಂತ್ರಣಕ್ಕೆ ಬರುತ್ತಿರುವಂತೆಯೇ ಇದೀಗ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸೀಜನ್ ಬಂದಿದೆ. ಈ ವೇಳೆ ಎಚ್ಚರಿಕೆಯಿಂದ ಹಬ್ಬ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ನಡೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆ ಸರಳವಾಗಿ ಆಚರಿಸುವಂತೆ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ಭಾಸ್ಕರ ಅವರು ಮಾರ್ಗಸೂಚಿ ಹೊರಡಿಸಿದ್ದಾರೆ. ಹಬ್ಬವನ್ನು ಸರಳ, ಭಕ್ತಿಪೂರ್ವಕ ಹಾಗೂ ಅರ್ಥಗರ್ಭಿತವಾಗಿ ಆಚರಿಸಬೇಕು. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಆದೇಶ ಹೊರಡಿಸಲಾಗಿದೆ.
ಸರಕಾರದ ಮಾರ್ಗಸೂಚಿಯಲ್ಲೇನಿದೆ?
ಕ್ರಿಸ್ಮಸ್ ಹಬ್ಬ ಆಚರಣೆಗೆ ಸರಕಾರದ ನಿರ್ಬಂಧಗಳೇನು?
ಕ್ರಿಸ್ಮಸ್ ಹಬ್ಬ ಆಚರಣೆಯ ವೇಳೆ ಕ್ರೈಸ್ತರು ಚರ್ಚ್ ಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಯೋಜಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು
ಹಬ್ಬದ ಆಚರಣೆ ಸಂದರ್ಭ ಹಸ್ತಲಾಘವ, ಆಲಿಂಗನ ನಿಷೇಧಿಸಲಾಗಿದೆ
ದೂರದಿಂದಲೇ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಬೇಕು
ಡಿ. ೩೦ರಿಂದ ಜ.೨ರ ತನಕ ಪಬ್, ಕ್ಲಬ್ ರೆಸ್ಟೋರೆಂಟ್ ಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ
೬೫ ವರ್ಷ ಮೇಲ್ಪಟ್ಟವರು, ೧೦ ವರ್ಷದೊಳಗಿನವರು ಮನೆಯಲ್ಲೇ ಇರತಕ್ಕದ್ದು
ಸಾಮೂಹಿಕ ಕೂಟಗಳು(ವಸತಿ ಸಮುಚ್ಚಯಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ) ನಿಷೇಧ
ಹಬ್ಬ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿ ಮಾತ್ರವೇ ಬಳಸಬಹುದು
ಹೊಸ ವರ್ಷಾಚರಣೆಗೆ ಸರಕಾರದ ನಿರ್ಬಂಧಗಳೇನು?
ವಿಶೇಷ ಡಿಜೆ, ಡ್ಯಾನ್ಸ್ ಕಾರ್ಯಕ್ರಮ, ಪಾರ್ಟಿಗಳನ್ನು ನಿಷೇಧಿಸಲಾಗಿದೆ
ಆದರೆ, ಪಬ್, ಕ್ಲಬ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ
ಹೊಸ ವರ್ಷ ಸಂದರ್ಭ ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿದ್ದದೆ ಸೇರುವಿಕೆ ನಿಷೇಧ
ಹೊಸ ವರ್ಷಾಚರಣೆಯ ಸಂಭ್ರಮ ಆಚರಣೆಗೆ ನಿರ್ಬಂಧವಿಧಿಸಲಾಗಿದೆ
ಆದರೆ, ಜನಸಂಚಾರ, ಎಂದಿನಂತೆ ಓಡಾಟಕ್ಕೆ ನಿರ್ಬಂಧವಿಲ್ಲ
ಆಯ್ದ ರಸ್ತೆಗಳು, ಸ್ಥಳಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು,
ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕ್ರಮ ವಹಿಸಬಹುದು
೬೫ ವರ್ಷ ಮೇಲ್ಪಟ್ಟವರು, ೧೦ ವರ್ಷದೊಳಗಿನವರು ಮನೆಯಲ್ಲೇ ಇರತಕ್ಕದ್ದು
ಹೋಟೇಲ್, ಮಾಲ್, ಪಬ್, ರೆಸ್ಟೋರೆಂಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್,
ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು