ಮುಂಬೈ, ಡಿ.17 (DaijiworldNews/PY): ಟಿಆರ್ಪಿ ಹಗರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಮುಂಬೈ ಪೊಲೀಸರು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್ಗರ್ಹಿಯಾ ಅವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ತನಿಖೆಯ ಸಂದರ್ಭ ಹಗರಣದಲ್ಲಿ ರೊಮಿಲ್ ರಾಮ್ಗರ್ಹಿಯಾ ಅವರ ಪಾತ್ರವೂ ತಿಳಿದಿದ್ದು, ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಸಿಇಒ ವಿಕಾಸ್ ಖಾನ್ಚಂದಾನಿ ಅವರನ್ನು ಭಾನುವಾರ ಬಂಧಿಸಿದ್ದು, ಅವರು ಬುಧವಾರ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ.