ನವದೆಹಲಿ, ಡಿ.17 (DaijiworldNews/PY): 1965ರಲ್ಲಿ ಸ್ಥಗಿತವಾಗಿದ್ದ ಚಿಲಿಹತಿ-ಹಲ್ದಿಬಾರಿ ರೈಲ್ವೆ ರೈಲಯ ಸಂಪರ್ಕದ ಪುನಃಸ್ಥಾಪನೆ ಹಾಗೂ 7 ಒಪ್ಪಂದಗಳಿಗೆ ಭಾರತ ಹಾಗೂ ಬಾಂಗ್ಲಾದೇಶ ಸಹಿ ಹಾಕಿವೆ.
ಇದರೊಂದಿಗೆ ಹೈಡರೋಕಾರ್ಬನ್, ಕೃಷಿ, ಜವಳಿ ಕ್ಷೇತ್ರ ಹಾಗೂ ವಿವಿಧ ಕ್ಷೃತ್ರಗಳಿಗೆ ಸಹಕಾರವನ್ನು ಒದಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಶೃಂಗ ಸಭೆಯ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತುಕತೆ ನಡೆಸಿದರು.
ಗುರುವಾರ ಬಾಂಗ್ಲಾದೇಶದಲ್ಲಿ ಆರಂಭವಾದ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, "ಬಾಂಗ್ಲಾದೇಶವು ಭಾರತದ ನೆರೆಯ ಮಿತ್ರರಾಷ್ಟ್ರವಾಗಿದ್ದು, ಇದಕ್ಕೆ ಪ್ರಮುಖ ಸ್ಥಾನ ನೀಡಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಪ್ರಮುಖ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಬಾಂಗ್ಲಾ ಪ್ರಧಾನಿ, "ಭಾರತ ನಮ್ಮ ನಿಜವಾದ ಸ್ನೇಹಿತ" ಎಂದು ಬಣ್ಣಿಸಿದ್ದಾರೆ.