ನವದೆಹಲಿ,ಡಿ.17 (DaijiworldNews/HR): ಬಿಜೆಪಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಂಸದ ಸತ್ಯದೇವ್ ಸಿಂಗ್ ಅವರು ಬುಧವಾರ ರಾತ್ರಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸತ್ಯದೇವ್ ಸಿಂಗ್ ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಸತ್ಯದೇವ್ ಅವರು 1977ರಲ್ಲಿ ಭಾರತೀಯ ಲೋಕ್ ದಳ ಟಿಕೆಟ್ನಿಂದ ಗೋಂಡಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 1991 ಮತ್ತು 1996ರಲ್ಲಿ ಬಲರಾಮ್ ಪುರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು.
ಇನ್ನು 1980ರಿಂದ 1985ರವರೆಗೆ ಸತ್ಯದೇವ್ ಅವರು ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.