ಕೇರಳ,ಡಿ.17 (DaijiworldNews/HR): ಎಸ್ಎಸ್ಎಲ್ಸಿ ಹಾಗೂ ಹಯರ್ ಸೆಕಂಡರಿ, ವೊಕೇಶನಲ್ ಹಯರ್ ಸೆಕಂಡರಿ ಪರೀಕ್ಷೆ ಮಾರ್ಚ್ 17 ರಿಂದ ಕೊರೊನಾ ಮಾರ್ಗಸೂಚಿಯೊಂದಿಗೆ ಮಾ.30 ರ ತನಕ ನಡೆಯಲಿದೆ.
ಸಾಂಧರ್ಭಿಕ ಚಿತ್ರ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇರಳ ಸಚಿವ ಸಂಪುಟ ಸಭೆ ಈ ತೀರ್ಮಾನ ತೆಗೆದುಕೊಂಡಿದೆ.
ಪರೀಕ್ಷೆಯ ಪೂರ್ವ ತಯಾರಿಯನ್ನು ಶಿಕ್ಷಣ ಇಲಾಖೆ ಈಗಾಗಾಲೇ ಆರಂಭಿಸಿದ್ದು, ಪರೀಕ್ಷೆಯ ಹಿನ್ನಲೆಯಲ್ಲಿ ಪ್ರಾಕ್ಟಿಕಲ್ ತರಗತಿಗಳು ಜನವರಿ ಒಂದರಿಂದ ಆರಂಭಗೊಳ್ಳಲಿದೆ.
ಜೂನ್ ತಿಂಗಳಿನಿಂದ ನಡೆಯುತ್ತಿರುವ ಆನ್ಲೈನ್ ತರಗತಿಗಳ ಮರು ಮೌಲ್ಯಮಾಪನ ಹಾಗೂ ಸಂಶಯ ದೂರೀಕರಿಸುವ ನಿಟ್ಟಿನಲ್ಲಿ ಶಾಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಾದರಿ ಪರೀಕ್ಷೆ ಹಾಗೂ ಕೌನ್ಸಿಲಿಂಗ್ ಶಾಲಾ ಮಟ್ಟದಲ್ಲಿ ನಡೆಯಲಿದೆ.