ನವದೆಹಲಿ, ಡಿ.17 (DaijiworldNews/HR): ಅಕ್ರಮವಾಗಿ ನುಸುಳಿದ ಇಬ್ಬರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವ ಘಟನೆ ಪಂಜಾಬ್ನ ಅಟ್ಟಾರಿ ರಜಾತಾಳ್ ಗಡಿ ಪ್ರದೇಶದಲ್ಲಿ ಗುರುವಾರ ನಸುಕಿನ ವೇಳೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಬಿಎಸ್ಎಫ್ ದಾಳಿಗೆ ಬಲಿಯಾಗಿರುವ ಇಬ್ಬರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಬಿಎಸ್ಎಫ್ ಶೋಧ ಕಾರ್ಯಾಚರಣೆ ನಡೆಸುತ್ತಿದೆ, ಆದರೆ ಅತೀಯಾದ ಮಂಜಿನ ವಾತಾವರಣದಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಮೂಲಗಳು ತಿಳಿಸಿವೆ.