ಬೆಂಗಳೂರು, ಡಿ. 16 (DaijiworldNews/SM): ಭೂ ಸುಧಾರಣಾ ಕಾಯ್ದೆ-2020 ಮತ್ತು ಪ್ರಸ್ತಾವಿತ ಕಾರ್ಮಿಕ ಸುಧಾರಣಾ ಮಸೂದೆ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ತರುವ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ 103ನೇ ಜನರಲ್ ಬಾಡಿ ಸಭೆಯನ್ನು ಉದ್ಘಾಟಿಸಿದರು. ಈ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಭೂ ಸುಧಾರಣೆಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ರಾಜ್ಯವು ಕೈಗಾರಿಕೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಹೇಳಿದರು.
"ಭೂಮಿ ಮತ್ತು ಕಾರ್ಮಿಕರಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸುಧಾರಣೆಗೆ ತೆಗೆದುಕೊಂಡ ಇಂತಹ ದಿಟ್ಟ ಕ್ರಮಗಳಿಂದಾಗಿ ರಾಜ್ಯವು ಒಟ್ಟು ವಿದೇಶಿ ನೇರ ಹೂಡಿಕೆಯ ಶೇಕಡಾ 42 ರಷ್ಟು ಹಣವನ್ನು ಪಡೆಯಲು ಸಾಧ್ಯವಾಗಿದೆ" ಎಂದು ಅವರು ಹೇಳಿದರು.
ಹೊಸ ಭೂ ಸುಧಾರಣಾ ಕಾಯ್ದೆಯು ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಭೂಮಿ ಖರೀದಿಯನ್ನು ಸರಾಗವಾಗಿ ಖರೀದಿಸಲು ಅವಕಾಶ ಕಲ್ಪಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.
"ನಮ್ಮ ಹೊಸ ಕೈಗಾರಿಕಾ ನೀತಿಯಡಿಯಲ್ಲಿ, ಯಾವುದೇ ಉದ್ಯಮಕ್ಕೂ ತಕ್ಷಣವೇ ಇಲ್ಲಿ ಅಂಗಡಿ ಸ್ಥಾಪಿಸಬಹುದಾಗಿದೆ. ಇದು ನಮ್ಮ ರಾಜ್ಯಕ್ಕೆ ಹೊಸ ಹೂಡಿಕೆದಾರರನ್ನು ಆಕರ್ಷಿಸುವ ಮತ್ತೊಂದು ಬದಲಾವಣೆಯಾಗಿದೆ" ಎಂದು ಅವರು ಹೇಳಿದರು.