ಕಾಸರಗೋಡು, ಡಿ.16 (DaijiworldNews/PY): ಕೇರಳದ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಮುನ್ಸಿಪಾಲಿಟಿ ಹಾಗೂ ಕಾಪೋರೇಷನ್ ಚುನಾವಣೆಯಲ್ಲಿ ಎಡಪಕ್ಷಗಳು ಭರ್ಜರಿ ಜಯ ಸಾಧಿಸಿದ್ದು, ಕಾಂಗ್ರೆಸ್, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
941 ಗ್ರಾಮ ಪಂಚಾಯತುಗಳಲ್ಲಿ ಎಲ್ಡಿಎಫ್ 514, ಯುಡಿಎಫ್ 377, ಎನ್ಡಿಎ 22 ಹಾಗೂ ಇತರರು 28 ಸ್ಥಾನಗಳಲ್ಲಿ ಜಯ ಸಾಧಿಸಿದೆ.
152 ಬ್ಲಾಕ್ ಪಂಚಾಯತುಗಳಿಗೆ ನಡೆದ ಚುನಾವಣೆಯಲ್ಲಿ 108 ಬ್ಲಾಕ್ ಗಳಲ್ಲಿ ಎಲ್ಡಿಎಫ್ ಹಾಗೂ 44 ಬ್ಲಾಕ್ ಗಳಲ್ಲಿ ಯುಡಿಎಫ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
86 ನಗರಸಭೆಗಳಲ್ಲಿ ಎಲ್ಡಿಎಫ್ 35, ಯುಡಿಎಫ್ 45 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಆರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಲ್ಡಿಎಫ್ 4, ಯುಡಿಎಫ್ 2ರಲ್ಲಿ ಗೆಲುವು ಸಾಧಿಸಿದೆ
ರಾಜ್ಯದ 14 ಜಿಲ್ಲಾ ಪಂಚಾಯಗಳಲ್ಲಿ ಎಲ್ಡಿಎಫ್ 10, ಯುಡಿಎಫ್ 4ರಲ್ಲಿ ಜಯ ಗಳಿಸಿದೆ.
ಮುಂಬರುವ ವರ್ಷ ವಿಧಾನ ಸಭೆಗೆ ಚುನಾವಣೆ ನಡೆಯಲಿರುವ ಕೇರಳದಲ್ಲಿ ಸ್ಥಳೀಯ ಆಡಳಿತಗಳಿಗೆ ನಡೆದ ಈ ಚುನಾವಣೆಯು ’ವಿಧಾನ ಸಭೆ ಚುನಾವಣೆಯ ಸೆಮಿಫೈನಲ್’ ಎಂದೇ ಬಿಂಬಿತವಾಗಿತ್ತು. ಇದೀಗ ಅಭೂತಪೂರ್ವ ಜಯವನ್ನು ದಾಖಲಿಸಿದ ಆಡಳಿತ ಪಕ್ಷವಾದ ಎಲ್ಡಿಎಫ್ ವಿರೋಧ ಪಕ್ಷವಾದ ಕಾಂಗ್ರೆಸ್ ಮುಂದಾಳುತ್ವದ ಯುಡಿಎಫ್ ಗೆ ವಿಶೇಷ ಮುನ್ನೆಚ್ಚರಿಕೆಯನ್ನು ನೀಡಿದೆ. ಇನ್ನು ಕೇರಳದಲ್ಲಿ ಬೇರೂರಲು ಶ್ರಮಿಸುತ್ತಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲೂ ಮತದಾರರು ಯಾವುದೇ ಮಹತ್ವವನ್ನು ನೀಡದೆ ಸರಾಸಾಗಟ ತಳ್ಳಿಹಾಕಿದ್ದಾರೆ.