ಮುಂಬೈ, ಡಿ.16 (DaijiworldNews/PY): ಟಿಆರ್ಪಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಶಾಮೀಲಾಗಿದ್ದ ಆರೋಪದಲ್ಲಿ ಬಂಧನದಲ್ಲಿದ್ದ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಕಾರ್ಯ ನಿರ್ವಾಹಕ ಅಧಿಕಾರಿ ವಿಕಾಸ್ ಖಾನ್ಚಂದಾನಿ ಅವರಿಗೆ ಡಿ.16ರ ಬುಧವಾರದಂದು ಮುಂಬೈ ಮೆಟ್ರೊಪಾಲಿಟನ್ ನ್ಯಾಯಾಲಯ ಜಾಮೀನು ನೀಡಿದೆ.
ಡಿ.13ರ ಭಾನವಾರದಂದು ವಿಕಾಸ್ ಅವರನ್ನು ಅಪರಾಧ ಗುಪ್ತಚರ ವಿಭಾಗದ ಪೊಲೀಸರು ಅವರ ಮನೆಯಲ್ಲೇ ಬಂಧಿಸಿದ್ದರು.
ನ್ಯಾಯಾಲಯವು 50 ಸಾವಿರ ನಗದು ಭದ್ರತಾ ಠೇವಣಿಯನ್ನು ಪಡೆದುಕೊಂಡು ವಿಕಾಸ್ ಅವರಿಗೆ ಜಾಮೀನು ಮಂಜೂರು ಮಾಡಿತು ಎಂದು ಆರೋಪಿ ಪರ ವಕೀಲ ನಿತೀನ್ ಪ್ರಧಾನ್ ಹೇಳಿದ್ದಾರೆ.
ಟಿಆರ್ಪಿ ವಂಚನೆ ಮಾಡಿದ ಆರೋಪ ಕೇಳಿಬಂದ ಕಾರಣ ಈ ಹಿಂದೆ ಮುಂಬೈ ಪೊಲೀಸರು ವಿಕಾಸ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 13 ಮಂದಿಯನ್ನು ಬಂಧಿಸಲಾಗಿದೆ.