ನವದೆಹಲಿ, ಡಿ.16 (DaijiworldNews/PY): "1971ರ ಯುದ್ಧದಲ್ಲಿ ಯೋಧರು ಮಾಡಿದ ತ್ಯಾಗವು ಎಲ್ಲಾ ಭಾರತೀಯರಿಗೆ ಸ್ಪೂರ್ತಿಯ ಮೂಲವಾಗಿದೆ. ಈ ದೇಶ ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ವಿಜಯ್ ದಿವಸ್ನಂದು ಭಾರತೀಯ ಸೇನೆಯ ಶೌರ್ಯಕ್ಕೆ ಹಾಗೂ ಶೌರ್ಯದ ಸಂಪ್ರದಾಯಕ್ಕೆ ನನ್ನ ವಂದನೆಗಳು. 1971ರ ಯುದ್ಧದಲ್ಲಿ ಯೋಧರು ತಮ್ಮ ಶೌರ್ಯದ ಹೊಸ ಕಥೆಯನ್ನು ಬರೆದಿದ್ದಾರೆ. ಯೋಧರು ಮಾಡಿದ ತ್ಯಾಗವು ಎಲ್ಲಾ ಭಾರತೀಯರಿಗೆ ಸ್ಪೂರ್ತಿಯ ಮೂಲವಾಗಿದೆ. ಈ ದೇಶ ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.
1971 ರ ಡಿಸೆಂಬರ್ 16ರಂದು ಭಾರತ-ಪಾಕಿಸ್ತಾನದ ನಡುವೆ ಯುದ್ದ ನಡೆಸಿದ್ದು, ಈ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ವಿಜಯ ಸಾಧಿಸಿತ್ತು. ಈ ಪ್ರಯುಕ್ತ ದೇಶಾದ್ಯಂತ ಡಿ.16 ಅನ್ನು ವಿಜಯ ದಿನ ಎಂದು ಆಚರಿಸಲಾಗುತ್ತಿದೆ.