ಮೈಸೂರು, ಡಿ.16 (DaijiworldNews/PY): "ಗೋಮಾಂಸದ ರಫ್ತು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ" ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆರೋಪಿಸಿದ್ದಾರೆ.
"ನಮ್ಮ ದೇಶದಿಂದ ಗೋಮಾಂಸ ರಫ್ತು ಮಾಡುವವರ ಪೈಕಿ ಮೇಲ್ವರ್ಗದವರು ಹಾಗೂ ಬ್ರಾಹ್ಮಣರೇ ಅಧಿಕವಾಗಿದ್ದಾರೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೆ. ಇಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಿ ಹೊರ ದೇಶಗಳಿಗೆ ರಫ್ತು ಮಾಡುವ ಹುನ್ನಾರವಿದೆ" ಎಂದಿದ್ದಾರೆ.
"ರೈತರು ಅನುಪಯುಕ್ತವಾದ ಎಮ್ಮೆ, ದನ ಹಾಗೂ ಇತರ ಜಾನುವಾರಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ, ಅವರಿಗೆ ಅದನ್ನು ಸಾಕುವುದು ಕಷ್ಟ. ಹಾಗಾಗಿ ಆ ಜಾನುವಾರುಗಳನ್ನು ರೈತರು ಮಾರಾಟ ಮಾಡುತ್ತಾರೆ. ಹಳ್ಳಿಯ ರೈತರು ಜಾನುವಾರಗಳ ವಿಚಾರದಲ್ಲಿ ಯಾವುದೇ ರೀತಿಯಾದ ಭಾವುಕ ವಿಷಯಗಳನ್ನು ಇಟ್ಟುಕೊಂಡಿಲ್ಲ. ಈ ಬಗ್ಗೆ ಸರ್ಕಾರ ತಿಳಿದುಕೊಳ್ಳಬೇಕು" ಎಂದು ಹೇಳಿದ್ದಾರೆ.