ಮುಂಬೈ,ಡಿ.15 (DaijiworldNews/HR): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ಗೆ ಮತ್ತೊಮ್ಮೆ ಮಾದಕವಸ್ತು ನಿಯಂತ್ರಣ ಘಟಕ(ಎನ್ಸಿಬಿ) ಸಮನ್ಸ್ ನೀಡಿದೆ.
ಅರ್ಜುನ್ ರಾಂಪಾಲ್ನ ಹೆಚ್ಚಿನ ವಿಚಾರಣೆಗಾಗಿ ಎನ್ಸಿಬಿ ಕಚೇರಿಗೆ ಡಿ.16 ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಇನ್ನು ಈ ಹಿಂದೆ ನವೆಂಬರ್ 10ರಂದು ಅರ್ಜುನ್ ಮನೆ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ ನವೆಂಬರ್ 13 ರಂದು ಅರ್ಜುನ್ ಅವರನ್ನು ಎನ್ಸಿಬಿ ವಿಚಾರಣೆ ನಡೆಸಿದ್ದು, ಅರ್ಜುನ ಅವರ ಗೆಳತಿಯನ್ನು ಎರಡು ದಿನಗಳ ಕಾಲ ಎನ್ಸಿಬಿ ವಿಚಾರಣೆ ನಡೆಸಿತ್ತು.