ನವದೆಹಲಿ,ಡಿ.15 (DaijiworldNews/HR): 2021 ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಖ್ಯ ಅಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ತಿಳಿಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವ ಎಸ್. ಜೈಶಂಕರ್ ಜತೆಗಿನ ಮಾತುಕತೆ ವೇಳೆ ಯುಕೆ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ "ಗಣರಾಜ್ಯೋತ್ಸವಕ್ಕೆ ಮುಖ್ಯ ಅಥಿಯಾಗಿ ಭಾಗವಹಿಸಬೇಕು ಎಂಬ ಭಾರತದ ಆಹ್ವಾನವನ್ನು ಬೋರಿಸ್ ಜಾನ್ಸ್ ನ ಸ್ವೀಕರಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಇನ್ನು ಮುಂದಿನ ವರ್ಷ ಬ್ರಿಟನ್ ಆಯೋಜಿಸಿರುವ ಜಿ7ಶೃಂಗದ ಜತೆ ಕೈಜೋಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೋರಿಸ್ ಜಾನ್ಸನ್ ಆಹ್ವಾನಿಸಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ತಿಳಿಸಿದ್ದಾರೆ.