ಶಿವಮೊಗ್ಗ,ಡಿ.15 (DaijiworldNews/HR): ಇಂದು ವಿಧಾನ ಪರಿಷತ್ ಕಲಾಪದಲ್ಲಿಂದು ನಡೆದ ತಳ್ಳಾಟಕ್ಕೆ ಕಾಂಗ್ರೆಸ್ ಕಾರಣ, ಕಾಂಗ್ರೆಸ್ ಆರಂಭದಲ್ಲಿ ಮಾಡಿದ ತಪ್ಪಿನಿಂದಾಗಿ ಇಂಥ ಘಟನೆ ನಡೆದಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಈ ಹಿಂದೆ ನಾನು ಸಭಾಪತಿಯಾಗಿದ್ದಾಗಲೂ ಇದೇ ರೀತಿ ನಡೆದಿತ್ತು, ನನ್ನ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆದರೆ ಆಗ ನಾನು ಸಭಾಪತಿ ಸ್ಥಾನದಿಂದ ಕೆಳಗಿಳಿದು ಬಂದು ಕುಳಿತು ಆ ಸ್ಥಾನದಲ್ಲಿ ಉಪಸಭಾಪತಿಯನ್ನು ಕೂರಿಸಿದ್ದೆ. ಬಳಿಕ ಚುನಾವಣೆ ನಡೆದು ನನಗೆ ಬಹುಮತ ಸಿಕ್ಕಿದಾಗ ಮತ್ತೆ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದೆ" ಎಂದರು.
ಇನ್ನು "ಕಾಂಗ್ರೆಸ್ ನಾಯಕರು ಅಧಿಕಾರ ನಡೆಸುವುದು ತಮ್ಮ ಆಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದು, ಜೊತೆಗೆ ನೆಹರೂ ಕುಟುಂಬದವರು ಹಾಗೂ ವಂಶ ಪಾರಂಪರ್ಯವಾಗಿ ಅಧಿಕಾರ ನಡೆಸಬೇಕು ಎಂಬ ಮನೋಭಾವ ಕಾಂಗ್ರೆಸ್ ನವರದ್ದಾಗಿದೆ" ಎಂದು ಹೇಳಿದ್ದಾರೆ.