ನವದೆಹಲಿ, ಡಿ.15 (DaijiworldNews/MB) : ''ಮೋದಿ ಸರ್ಕಾರಕ್ಕೆ ಪ್ರತಿಭಟನಾನಿರತ ರೈತರು ಖಲಿಸ್ತಾನಿಗಳು, ಬಂಡವಾಳಶಾಹಿಗಳು ಉತ್ತಮ ಸ್ನೇಹಿತರು'' ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಮೋದಿ ಸರ್ಕಾರಕ್ಕೆ ಭಿನ್ನಾಭಿಪ್ರಾಯ ಹೊಂದಿರುವ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿಗಳು, ನಾಗರಿಕರು ನಗರ ನಕ್ಸಲರು, ವಲಸೆ ಕಾರ್ಮಿಕರು ಕೊರೊನಾ ಪ್ರಸರಣ ಮಾಡುವವರು, ಅತ್ಯಾಚಾರಕ್ಕೊಳಗಾದವರು ಸರ್ಕಾರಕ್ಕೆ ಯಾರೂ ಅಲ್ಲ, ಪ್ರತಿಭಟನಾನಿರತ ರೈತರು ಖಲಿಸ್ತಾನಿಗಳು, ಆದರೆ ಬಂಡವಾಳಶಾಹಿಗಳು ಉತ್ತಮ ಸ್ನೇಹಿತರು'' ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 20 ದಿನಗಳಿಂದ ದೆಹಲಿಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಡೆದ ಹಲವು ಹಂತದ ಮಾತುಕತೆಗಳು ವಿಫಲವಾಗಿದೆ.