ಭೋಪಾಲ್ ,ಡಿ.14(DaijiworldNews/HR): ನನಗೆ ಇನ್ನು ಯಾವುದೇ ಹುದ್ದೆ ಬೇಕೆಂಬ ಆಸೆ ಇಲ್ಲ, ನಾನು ವಿಶ್ರಾಂತಿ ತೆಗೆದುಕೊಂಡು ಮನೆಯಲ್ಲೇ ಇರಲು ಸಿದ್ದನಾಗಿದ್ದೇನೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಅವರು ರಾಜಕಾರಣದಿಂದ ನಿವೃತ್ತಿಯಾಗುವ ಕುರಿತು ಸುಳಿವು ನೀಡಿದ್ದಾರೆ.
ಈ ಕುರಿತು ಮಧ್ಯಪ್ರದೇಶದ ಚಿನ್ ದ್ವಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ರಾಜಕೀಯದಲ್ಲಿ ಎಲ್ಲಾ ಹುದ್ದೆಗಳನ್ನು ಅಲಕಂರಿಸಿದ್ದೇನೆ, ನನಗೆ ಇನ್ನು ಯಾವುದೇ ಹುದ್ದೆ ಬೇಕೆಂಬ ಆಸೆ ಇಲ್ಲ, ನಾನು ವಿಶ್ರಾಂತಿ ತೆಗೆದುಕೊಂಡು ಮನೆಯಲ್ಲೇ ಇರಲು ಸಿದ್ದನಾಗಿದ್ದೇನೆ" ಎಂದು ಹೇಳಿದ್ದಾರೆ.
ಇನ್ನು ಕಮಲ್ ನಾಥ್ ಅವರು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮಾತ್ರವಲ್ಲದೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಕೂಡಾ ಆಗಿದ್ದಾರೆ. ಮಧ್ಯಪ್ರದೇಶದ ರಾಜರಾಜಕಾರಣದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲು ಹಾದಿಯನ್ನು ಸುಗಮಗೊಳಿಸಬೇಕು ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಕಮಲ್ ನಾಥ್ ಮೇಲೆ ಒತ್ತಡ ಹೇರುತ್ತಲೇ ಇದೆ.