ನವದೆಹಲಿ, ಡಿ.14(DaijiworldNews/HR): ಗೂಗಲ್ ನ ಜಿಮೇಲ್, ಯೂಟ್ಯೂಬ್ ಸೇರಿದಂತೆ ಇತರ ಸೇವೆಗಳು ಸೋಮವಾರ ಸಂಜೆಯಿಂದ ಡೌನ್ ಆಗಿದ್ದು, ಇಮೇಲ್ ರವಾನೆ ಮತ್ತು ಯೂಟ್ಯೂಬ್ ವೀಡಿಯೋ ವೀಕ್ಷಣೆ ಲಭ್ಯವಾಗುತ್ತಿರಲಿಲ್ಲ, ಆದರೆ ಸದ್ಯ ಇದೀಗ ಸಮಸ್ಯೆ ನಿವಾರಣೆಯಾಗಿದೆ.
ಇಮೇಲ್, ಯೂಟ್ಯೂಬ್ ಮಾತ್ರವಲ್ಲದೇ ಗೂಗಲ್ ಡ್ರೈವ್ ಸೇರಿದಂತೆ ಗೂಗಲ್ ನ ಹಲವಾರು ಸೇವೆಗಳು ಸದ್ಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.
ಇನ್ನು ಈ ಕುರಿತು ಅನೇಕ ಬಳಕೆದಾರರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.