ನವದೆಹಲಿ,ಡಿ.14(DaijiworldNews/HR): ಕೇಂದ್ರ ಸರ್ಕಾರವು ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಸೇರಿದಂತೆ ಎಲ್ಲ ಮಾದರಿಯ ಚಿತ್ರಗಳನ್ನು ಪ್ರೋತ್ಸಾಹಿಸಲು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ಕುರಿತು ಆನ್ಲೈನ್ ಅಂತರರಾಷ್ಟ್ರೀಯ ಕೊರೊನಾ ವೈರಸ್ ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಅವರು, "ಎಲ್ಲ ಮಾದರಿಯ ಚಿತ್ರಗಳು, ಉತ್ತಮ ಚಿತ್ರಗಳು ಹಾಗೂ ಜನರು ಇಷ್ಟಪಡುವ ಚಿತ್ರಗಳು ಬರಬೇಕು ಎನ್ನುವುದು ಸರ್ಕಾರದ ಯೋಜಯಾಗಿದ್ದು, ಕೊರೊನಾವನ್ನು ವಿಷಯವಾಗಿರಿಸಿಕೊಂಡು ಚಿತ್ರೋತ್ಸವ ಆಯೋಜನೆ ಮಾಡಿರುವುದು ಹೊಸ ಆಲೋಚನೆ" ಎಂದರು.
ಇನ್ನು ಇಂಡಿಯನ್ ಇನ್ಫೊಟೈನ್ಮೆಂಟ್ ಮೀಡಿಯಾ ಕಾರ್ಪೊರೇಷನ್(ಐಐಎಂಸಿ) ಆಯೋಜಿಸಿದ್ದ ಈ ಚಿತ್ರೋತ್ಸವಕ್ಕೆ 108 ದೇಶಗಳಿಂದ 2,800 ಕಿರುಚಿತ್ರಗಳು ಬಂದಿದ್ದು, ಕೊರೊನಾ ರೋಗಕ್ಕಿರುವ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳು ಹಾಗೂ ಇದರಿಂದ ಜನರ ಮೇಲಾಗಿರುವ ಪರಿಣಾಮವನ್ನು ವಿಷಯವಾಗಿಸಿ ಕಿರುಚಿತ್ರಗಳನ್ನು ರಚಿಸಲಾಗಿದೆ.